ರೈತರಿಗೆ ಪಶುಸಂಗೋಪನಾ ತರಬೇತಿ

ಸುದ್ದಿ360 ದಾವಣಗೆರೆ.ಜು.04: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜುಲೈ ಮಾಹೆಯಲ್ಲಿ ರೈತರಿಗೆ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜು.07 ಮತ್ತು 08 ರಂದು 25 ಜನರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ಎರಡು ಪಾಸ್ … Read more

ಬಡ ಮಕ್ಕಳಿಗೆ ಪಿಯು, ಡಿಗ್ರಿ ಶಿಕ್ಷಣ ಉಚಿತ

ಪತ್ರಿಕಾ ವಿತರಕರು, ವಿತರಕರು ಮಕ್ಕಳು- ಪತ್ರಕರ್ತರ ಮಕ್ಕಳಿಗೂ ಉಚಿತ  ಪ್ರವೇಶ ಸುದ್ದಿ360 ಹುಬ್ಬಳ್ಳಿ, ಜು.04: ಧಾರವಾಡ ರಾಯಪುರ ದಲ್ಲಿರುವ ಡಾ. ಡಿ.ಜಿ. ಶೆಟ್ಟಿ ಎಜುಕೇಶನ್ ಸೊಸೈಟಿಯಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಡಿ ಜಿಎಂದು ಸಂಸ್ಥೆಯ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿ ಹೇಳಿದರು. ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2001 ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಪ್ರತಿಭಾವಂತ ಅಷ್ಟೇ ಅಲ್ಲದೆ ಕಡಿಮೆ ಅಂಕಗಳನ್ನು ಪಡೆದು ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ … Read more

ಹಂತಕರ ಗುಂಡಿಕ್ಕಿ ಕೊಲ್ಲಿ- ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟ

ಶಾಸಕ ಎಂಪಿಆರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ಸುದ್ದಿ360 ಹೊನ್ನಾಳಿ,ಜು.04: ರಾಜಸ್ಥಾನದ ಟೈಲರ್ ಕನ್ಹಯ್ಯಲಾಲ್ ಹತ್ಯೆ ಪ್ರಕರಣ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಾಣ ಬೆದರಿಕೆ ಹಾಕಿರುವುದನ್ನು ಖಂಡಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇಲ್ಲಿನ ಹಿರೇಕಲ್ಮಠದ ಶಾಸಕರ ಮನೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶಾಸಕರನ್ನೊಳಗೊಂಡಂತೆ ಬಿಜೆಪಿ ಕಾರ್ಯಕರ್ತರು ಜಿಟಿ ಜಿಟಿ ಮಳೆಯಲ್ಲಿಯೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, … Read more

ಅಧ್ಯಕ್ಷರಾಗಿ ಉಜ್ಜನಪ್ಪ ಆಯ್ಕೆ

ಸುದ್ದಿ360 ದಾವಣಗೆರೆ.ಜು.04: ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಎ.ಆರ್. ಉಜ್ಜನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ 13 ನಿರ್ದೇಶಕರ ಸ್ಥಾನಗಳಿಗೆ ಜೂ.25ರಂದು ಚುನಾವಣೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎ.ಆರ್. ಉಜ್ಜನಪ್ಪರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಗಿದೆ. ಎ.ಆರ್. ಉಜ್ಜನಪ್ಪ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದು, ದಾವಣಗೆರೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ, ಜಿಲ್ಲಾ … Read more

ಸರಕಾರಿ ಶಾಲಾ ಕಟ್ಟಡ ನೆಲಸಮ – ಲಕ್ಷಾಂತರ ರೂ. ಗುಳುಂ

ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಗ್ರಾಮಸ್ಥರ ಆಗ್ರಹ ಸುದ್ದಿ360 ದಾವಣಗೆರೆ.ಜು.04: ಇಲಾಖೆ ಗಮನಕ್ಕೆ ತಾರದೆ ಸರಕಾರಿ ಶಾಲೆಯ ಹಳೆಕಟ್ಟಡ ನೆಲಸಮಗೊಳಿಸಿ, ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಿನ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯರು ಮಾರಿಕೊಂಡಿರುವುದಾಗಿ ತಾಲೂಕಿನ ಲೋಕಿಕೆರೆ ಗ್ರಾಮಸ್ಥರು ಆರೋಪಿಸಿದರು. ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮದ ನಿವಾಸಿ ಪುರಂದರ ಲೋಕಿಕೆರೆ ಮಾತನಾಡಿ, ಗ್ರಾಮದಲ್ಲಿನ ಶ್ರೀ ಮಾರುತಿ ಸರಕಾರಿ ಪ್ರೌಢಶಾಲೆಯ ಹಳೆಯ ಕಟ್ಟಡವನ್ನು ಶಿಕ್ಷಣ ಇಲಾಖೆ ಗಮನಕ್ಕೆ ತಾರದೇ ನೆಲಸಮಗೊಳಿಸಲಾಗಿದೆ. ಮತ್ತು ಅದರಲ್ಲಿದ್ದ … Read more

ದಾವಣಗೆರೆಯಲ್ಲಿ ಯೋಗಥಾನ್ 2022 – ಜು.6ರಂದು ಸಭೆ

ಸುದ್ದಿ360 ದಾವಣಗೆರೆ.ಜು.04: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಗಷ್ಟ್ 12 ರಿಂದ 14 ರವರೆಗೆ ಯೋಗಥಾನ್-2022 ಕಾರ್ಯಕ್ರಮವನ್ನು ಸಂಘಟಿಸಿ ಗಿನ್ನಿಸ್ ದಾಖಲೆ/ವಿಶ್ವ ದಾಖಲೆ ಸ್ಧಾಪಿಸಲು ದಾವಣಗೆರೆ ಜಿಲ್ಲೆಯಲ್ಲಿ ಯೋಗಥಾನ್-2022 ಕಾರ್ಯಕ್ರಮವನ್ನು ಆಯೋಜಿಸಬೇಕಾಗಿರುತ್ತದೆ. ದಾವಣಗೆರೆ ಜಿಲ್ಲೆಯ ಯೋಗ ಸಂಬಂಧಿತ ಸಂಘ ಸಂಸ್ಥೆಗಳು ಹಾಗೂ ಇತರೆ ಯೋಗಾಸಕ್ತ ಸಂಸ್ಧೆಗಳು ಹಾಗೂ ಸರ್ಕಾರೇತರ ಸಂಸ್ಧೆಗಳು ಜು.06 ರಂದು ಮಧ್ಯಾಹ್ನ 3.30 ಕ್ಕೆ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಇಲ್ಲಿ … Read more

ಕೆರೆಯಲ್ಲಿ ಮುಳುಗಿದ ನಂದಿನಿ ಹಾಲಿನ ವಾಹನ

ಸುದ್ದಿ360 ದಾವಣಗೆರೆ.ಜು.04:  ನಂದಿನಿ ಹಾಲಿನ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆರೆಯಲ್ಲಿ ಮುಳುಗಿರುವ ಘಟನೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ವಾಹನದಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂದಿನ ಹಾಲಿನ ಶಾಪ್ ಗಳಿಗೆ ಹಾಲು ಪೂರೈಸುತ್ತಿದ್ದ ವಾಹನ ಇದಾಗಿದ್ದು, ವಾಹನದಲ್ಲಿದ್ದ 500ಕ್ಕೂ ಅಧಿಕ ಲೀಟರ್ ಹಾಲು ನೀರು ಪಾಲಾಗಿದೆ. ದೇವರಹಳ್ಳಿ ಅಂಗಡಿಗಳಿಗೆ ಹಾಲು ವಿತರಿಸುವ ಸಲುವಾಗಿ ನಲ್ಲೂರು ಕಡೆ ಹೊರಟಿದ್ದ ವಾಹನ ಇದಾಗಿತ್ತು. ಸಂತೆಬೆನ್ನೂರು … Read more

ಕೆವಿಪಿವೈನಲ್ಲಿ ಸರ್‌ಎಂವಿ ಪಿಯು ಕಾಲೇಜಿನ 11 ವಿದ್ಯಾರ್ಥಿಗಳಿಗೆ ರ‍್ಯಾಂಕ್

ಸುದ್ದಿ360 ದಾವಣಗೆರೆ.ಜು.04: ರಾಷ್ಟ್ರಮಟ್ಟದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ಪರೀಕ್ಷೆಯಲ್ಲಿ ನಗರದ ಸರ್ ಎಂವಿ ಕಾಲೇಜಿನ 11 ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸುವ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಎಲ್ಲಾ 11 ವಿದ್ಯಾರ್ಥಿಗಳಿಗೆ ನಗರದ ಎಸ್.ಎ. ರವೀಂದ್ರನಾಥ ನಗರದಲ್ಲಿರುವ ಸರ್ ಎಂವಿ ಕಾಲೇಜಿನ ನೂತನ ಕ್ಯಾಪಸ್‌ನಲ್ಲಿ ಭಾನುವಾರ ಅಭಿನಂದನಾ ಸಮಾರಂಭ ಎರ್ಪಡಿಸಲಾಗಿತ್ತು. ರ‍್ಯಾಂಕ್ ಪಡೆದು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಟಿ.ಎಚ್. ಭರತೇಶ್ (108), ಎಸ್.ಆರ್. … Read more

ಜಿಲ್ಲಾ ಉಸ್ತವಾರಿ ಸಚಿವರ ಜಿಲ್ಲಾ ಪ್ರವಾಸ

byrathi basavaraj

ಸುದ್ದಿ360 ದಾವಣಗೆರೆ, ಜು.02: ಮಾನ್ಯ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಇವರು ಜು.03 ರ ಭಾನುವಾರ ದಂದು ಬೆಳಿಗ್ಗೆ 10 ರಿಂದ ಮ.12 ಗಂಟೆಯವೆರೆಗೆ ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ ಚಂದ್ರಗುಪ್ತ ಮೌರ್ಯ ಯುಪಿಎಸ್‍ಸಿ ಕೆಪಿಎಸ್‍ಸಿ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರೆಂದು ಅವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತ್ಯದಿಂದ ಸಮಾಜದಲ್ಲಿನ ದೌರ್ಜನ್ಯ ತಡೆಯಲು ಸಾಧ್ಯ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಮತ ಸುದ್ದಿ360 ದಾವಣಗೆರೆ, ಜು.02: ಸಮಾಜದಲ್ಲಿ ನಡೆಯುವ ಅಸಮಾನತೆ, ದೌರ್ಜನ್ಯಗಳನ್ನು ತಡೆಯಲು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಇಂದು ನಮಗೆ ವಚನಗಳು ಇಷ್ಟೊಂದು ಸುಲಭವಾಗಿ ಸಿಗುತ್ತಿವೆ … Read more

error: Content is protected !!