ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡಲ್ಲಿ ವ್ಯಕ್ತಿ ವಿಶ್ವಮಾನವನಾಗುತ್ತಾನೆ: ಬಸವಪ್ರಭು ಶ್ರೀ
ಸುದ್ದಿ360 ದಾವಣಗೆರೆ, ಆ.23: ಪ್ರತಿಯೊಬ್ಬರೂ ವಚನಗಳನ್ನು ಓದಬೇಕು, ಕಲಿಯಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವ್ಯಕ್ತಿ ವಿಶ್ವಮಾನವನಾಗುತ್ತಾನೆ ಎಂಬುದಾಗಿ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ದೊಡ್ಡಪೇಟೆಯ ಶ್ರೀ ಮುರುಘರಾಜೇಂದ್ರ ವಿರಕ್ತಮಠದಲ್ಲಿ ಇಂದು ಹಮ್ಮಿಕೊಂಡಿದ್ದ ವಚನ ಕಂಠಪಾಠ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ವಚನ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಮಾಜದಲ್ಲಿ ವೈದ್ಯರು, ಎಂಜಿನಿಯರ್, ಬುದ್ಧಿವಂತರು, ವಿದ್ಯಾವಂತರು, ವಿಜ್ಞಾನಿಗಳು ಸಿಗುತ್ತಾರೆ. ಆದರೆ ಸಾತ್ವಿಕರು ಸಿಗುವುದಿಲ್ಲ. ನಮ್ಮ … Read more