ಅವರ ಬಿಟ್ಟು ಅವರ ಬಿಟ್ಟು ಇವರ್ಯಾರು ?

ಸುದ್ದಿ360: ರಾಜಕಾರಣಿಗಳು ತಮ್ಮ ತಮ್ಮ ಸ್ತರದಲ್ಲಿ ನಡೆಯುವ ವಿದ್ಯಮಾನಗಳಿಗಿಂತಲೂ ವಿರೋಧಿ ಪಾಳಯದಲ್ಲಿನ ಆಗುಹೋಗುಗಳಲ್ಲಿ ಅತೀವ ಆಸಕ್ತಿ ವಹಿಸಿರುತ್ತಾರೆ. ಅಲ್ಲದೆ ಅದರಿಂದ ರಾಜಕೀಯವಾಗಿ ಆಗುವ ಲಾಭದ ಲೆಕ್ಕಾಚಾರದಲ್ಲಿ ಸದಾ ಇರುತ್ತಾರೆ ಎಂದರೆ ತಪ್ಪಾಗಲಾರದು.  ಇದು ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮತ್ತಷ್ಟು ಬಿರುಸುಗೊಳ್ಳುತ್ತದೆ. ಹಾಗೆಯೇ ಕೆಸರೆರೆಚಾಟವೂ ಶುರುವಾಗುತ್ತೆ ನೋಡಿ… ಮತದಾರ ಮಾತ್ರ ಹೈರಾಣಾಗಿ ಹೋಗುತ್ತಾನೆ. ನಾವು ಮತ ಚಲಾಯಿಸಿದ್ದು ಈ ವ್ಯಕ್ತಿಗಾ. . .!? ಎಂಬ ಆಶ್ಚರ್ಯದಾಯಕ ಪ್ರಶ್ನೆಗಳು ಉದ್ಭವಿಸೋದ್ರಲ್ಲಿ ಸಂಶಯವಿಲ್ಲ. ಬಲ್ಲವನೇ ಬಲ್ಲ ಬೆಲ್ಲದಾ ಸವಿಯ… ಎಂಬಂತೆ ರಾಜಕಾರಣಿಗಳಿಗಷ್ಟೇ ಗೊತ್ತು … Read more

ಸ್ಯಾಮ್ ಸನ್ ಡಿಸ್ಟಿಲರಿಯಲ್ಲೇನು ನಂದಿನಿ ಹಾಲು ತಯಾರಿಸುತ್ತಿದ್ದರಾ!?

ದಾವಣಗೆರೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪ್ರಶ್ನೆ ಸುದ್ದಿ360 ದಾವಣಗೆರೆ ಜ.18:  ನಾವು ಬುದ್ದಿಹೀನರೇ ಹಾಗಾಗಿಯೇ ನಾವು ವನ್ಯ  ಜೀವಿಗಳ ತಂಟೆಗೆ ಹೋಗಿಲ್ಲ. ಬುದ್ದಿವಂತರು ಅವುಗಳನ್ನು ತಮ್ಮ ಫಾರ್ಮ್ ಹೌಸ್‍ನಲ್ಲಿ ಇಟ್ಟುಕೊಂಡಿದ್ದರು. ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಳ್ಳುವವರು ಬುದ್ದಿವಂತಿಕೆಯಿಂದ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಕುಟುಕಿದ್ದಾರೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ಯ ಜೀವಿ ಪತ್ತೆ … Read more

ಸಚಿವರ ಬರುವಿಕೆಯಲ್ಲಿ ಬಸವಳಿದವರಿಗೆ ಸಂಗೀತದೂಟ ಬಡಿಸಿದ ಅಂಧ ಮಕ್ಕಳು

ಸುದ್ದಿ360 ದಾವಣಗೆರೆ, ಜೂನ್ 28: ಜಿಲ್ಲಾ ಉಸ್ತುವಾರಿ ಸಚಿವರೆಂದರೆ ಕೇಳಬೇಕೆ..? ಅವರು ಜಿಲ್ಲೆಗೆ ಭೇಟಿ ನೀಡಿದರೆಂದರೆ ಬಂದಾಗಿನಿಂದ ಹೊರಡುವವರೆಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ (ಭೈರತಿ)ಯವರ ಜೂ.28ರ ಜಿಲ್ಲಾ ಪ್ರವಾಸದಲ್ಲಿ ಹೀಗೆಯೇ ಸಾಕಷ್ಟು ಕಾರ್ಯಕ್ರಮಗಳು ಸೇರಿದ್ದವು. ಇದೇ ವೇಳೆ ಬೆಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಯಶವಂತರಾವ್‍ ಜಾಧವ್‍ ರವರ ಹುಟ್ಟುಹಬ್ಬದ ನಿಮಿತ್ತ ನಗರದದ ದೇವರಾಜು ಅರಸು ಬಡಾವಣೆಯ ಅಂಧ ಮಕ್ಕಳ ಶಾಲೆಯಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲೂ ಸಚಿವರ ಪಾಲ್ಗೊಳ್ಳುವಿಕೆ … Read more

ಯಶವಂತರಾವ್ ಜಾಧವ್ ಜನ್ಮದಿನಾಚರಣೆ (ಜೂ.29)

ಸುದ್ದಿ360 ದಾವಣಗೆರೆ, ಜೂ.27: ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಅವರ ಜನ್ಮದಿನವನ್ನು ಜೂ.29ರಂದು ಯಶವಂತ ರಾವ್ ಜಾಧವ್ ಸ್ನೇಹಬಳದಿಂದ ಆಯೋಜಿಸಲಾಗಿದೆ ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 62ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಯಶವಂತರಾವ್ ಜಾಧವ್ ಅವರು ಕಳೆದ 35 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತ ಹಾಗೂ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಸಮಾಜಮುಖಿ ಕಾರ್ಯಗಳು ಕಾರ್ಯಕರ್ತರಿಗೆ ಪ್ರೇರಣೆ ನೀಡುವಂತವಾಗಿವೆ … Read more

error: Content is protected !!