ಭೀಕರ ಅಪಘಾತ: ಬಾಲಕ ಸೇರಿ 7 ಮಂದಿ ದುರ್ಮರಣ

ಸುದ್ದಿ360, ಹೊಸಪೇಟೆ (hospet) ಅ.09: ಎರಡು ಮೈನಿಂಗ್ ಟಿಪ್ಪರ್ ಲಾರಿಗಳು ಮತ್ತು ಕ್ರ್ಯೂಸರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ (accident) 7 ಜನರ ದುರ್ಮಣ ಹೊಂದಿದ್ದಾರೆ.

ಹೊಸಪೇಟೆ ನಗರದ ಹೊರವಲಯದ ಟನಲ್ ಬಳಿ ಈ ಅಪಘಾತ ಸಂಭವಿಸಿದ್ದು, ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್‍ನಲ್ಲಿದ್ದ 7 ಜನರು ಮೃತಪಟ್ಟಿದ್ದು, ವಾಹನದಲ್ಲಿ ಸಿಲುಕಿರುವ ಶವಗಳನ್ನು ಹೊರ ತೆಗೆಯಲು ಪೊಲೀಸರ ಹರಸಾಹಸಪಟ್ಟಿದ್ದಾರೆ.

ಕ್ರೂಸರ್‍ನಲ್ಲಿದ್ದವರು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ‌.

ಕ್ರ್ಯೂಸರ್ ವಾಹನದಲ್ಲಿ ಒಟ್ಟು 13 ಜನರಿದ್ದರು ಎಂಬುದಾಗಿ ತಿಳಿದುಬಂದಿದ್ದು, ಮಿಕ್ಕವರ ಸ್ಥಿತಿ ಗಂಭೀವಾಗಿದೆ. ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರು ಹೊಸಪೇಟೆ ನಿವಾಸಿಗಳೆಂದು ಗುರುತಿಸಲಾಗಿದ್ದು,  ಉಮಾ, ಕೆಂಚವ್ವ, ಭಾಗ್ಯ, ಅನಿಲ, ಗೋಣಿ ಬಸಪ್ಪ, ಭೀಮಲಿಂಗಪ್ಪ,  ಬಾಲಕ ಯುವರಾಜ ದುರ್ಮರಣಕ್ಕೀಡದವರಾಗಿದ್ದಾರೆ.

ಸ್ಥಳಕ್ಕೆ ಎಸ್ ಪಿ ಶ್ರೀಹರಿಬಾಬು ತಕ್ಷಣ ಭೇಟಿ ನೀಡಿ, ಮೃತದೇಹಗಳನ್ನು ಹೊರತೆಗೆಯಲು ಸಿಬ್ಬಂದಿಗೆ ಸಹಕಾರ ನೀಡಿದರು.

Leave a Comment

error: Content is protected !!