ದಾವಣಗೆರೆ ಕೇಂದ್ರೀಯ ವಿದ್ಯಾಲಯದಲ್ಲಿ ‘ವನಮಹೋತ್ಸವ’ ಆಚರಣೆ

ಸುದ್ದಿ360 ದಾವಣಗೆರೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗ ಹಾಗೂ ಅರಣ್ಯ ಇಲಾಖೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವನಮಹೋತ್ಸವ ಪ್ರಯುಕ್ತ ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಮರಗಳನ್ನು ಬೆಳೆಸುವ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಮಕ್ಕಳು ಸಸಿ ನೆಡುವಿಕೆಯಲ್ಲಿ ಪಾಲ್ಗೊಂಡು ಅವುಗಳನ್ನು ಸಸಿಗಳ ಪಾಲನೆ ಮಾಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಡಾ. ರವಿಕುಮಾರ್ ಎ. ಜೆ, ಜಿಲ್ಲಾ ಪರಿಸರ ಅಧಿಕಾರಿ ಡಾ. ಲಕ್ಷ್ಮೀಕಾಂತ್,  ಅರಣ್ಯ ಉಪವಲಯಾಧಿಕಾರಿ ಎಂ. ಬಿ. ಇದಾಯತ್‍ವುಲ್ಲಾ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಕೆ. ಏಕಾಂತಪ್ಪ,  ಹಾಗೂ ಕ.ರಾ.ಮ.ಸಾ.ಪ. ಪದಾಧಿಕಾರಿಗಳಾದ ಎಂ.ಕುಮಾರ್, ಸುರೇಶ್ ರಾವ್, ಬೀರಪ್ಪ ಕೆ.ಎಸ್. ಮತ್ತು ಶಾಲಾ ಸಿಬ್ಬಂದಿಗಳು  ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!