‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮಹಿಳಾ ಶಕ್ತಿ ಮುಂದಾಗಬೇಕು’

NFIW ಮಹಿಳಾ ಸಂಘಟನಾ ಸಭೆಯಲ್ಲಿ ಸಿಪಿಐ ಮುಖಂಡ ಕಾಂ. ಆನಂದರಾಜ್

ಸುದ್ದಿ360 (suddi360) ದಾವಣಗೆರೆ (davangere news):  ಎಲ್ಲಾ ಹೋರಾಟಗಳ ಪೈಕಿ ಮಹಿಳಾ ಶಕ್ತಿಯ ಹೋರಾಟ ಬಹಳ ಮಹತ್ವ ಪಡೆದುಕೊಂಡಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ( ಜಿಲ್ಲಾ ಮುಖಂಡರಾದ ಕಾಂ. ಆನಂದರಾಜ(anandaraj) ರವರು ಹೇಳಿದರು.

ಅವರಿಂದು ದಾವಣಗೆರೆ ಅಶೋಕ ರಸ್ತೆಯಲ್ಲಿರುವ ಕಾಂ ಪಂಪಾಪತಿ ಭವನದಲ್ಲಿ NFIW ಅಖಿಲ ಭಾರತ ಮಹಿಳಾ ಒಕ್ಕೂಟದ ಜಿಲ್ಲಾ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡುತ್ತ ಮಹಿಳೆಯರ ಹೋರಾಟಕ್ಕೆ ಯಾವುದೇ ಸರ್ಕಾರಗಳು ಮಣಿಯುತ್ತವೆ ಎಂದರಲ್ಲದೆ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಮಹಿಳಾ ಸಂಘಟನೆ ಮುಂದಾಗಬೇಕು ಎಂದರು.

NFIW ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮನ್ ಸಂಘಟನೆಯ ಜಿಲ್ಲಾ ಉಸ್ತುವಾರಿಗಳು ಮತ್ತು ಸಿಪಿಐ ಜಿಲ್ಲಾ ಕಾರ್ಯದರ್ಶಿಗಳಾದ ಕಾಂ ಆವರಗೆರೆ ಚಂದ್ರು ಮಾತನಾಡಿ NFIW ಮಹಿಳಾ ಸಂಘಟನೆಯನ್ನು ದಾವಣಗೆರೆ ಜಿಲ್ಲೆಯಲ್ಲಿ ಪುನರ್ ಸಂಘಟಿಸುವುದರೊಂದಿಗೆ ಸ್ಥಳೀಯ ಘಟಕಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರನ್ನು ಹೋರಾಟಕ್ಕೆ ಅಣಿನೇರಿಸಬೇಕೆಂದರಲ್ಲದೆ ಸಮಾಜದಲ್ಲಿ ನಡೆಯುವ ಅನಿಷ್ಟ ಪದ್ದತಿಗಳ ವಿರುದ್ಧ ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಟ ಮಾಡುವುದರ ಮೂಲಕ ದುರ್ಬಲ ಮಹಿಳೆಯರಿಗೆ ನೈತಿಕ ಬೆಂಬಲ ಕೊಡುವುದರೊಂದಿಗೆ ಶಕ್ತಿ ತುಂಬುವ ಕೆಲಸಮಾಡಬೇಕೆಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಕಾಂ ಎಂ ಬಿ ಶಾರದಮ್ಮ ಮಾತನಾಡಿ ಮಹಿಳಾ ಸಂಘಟನೆಯನ್ನು ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿಸ್ತರಿಸುವುದರ ಮೂಲಕ ಮಹಿಳಾ ಸಂಘಟನೆಯನ್ನು ಬಲಪಡಿಸೋಣ ಎಂದರು.

ಮಹಿಳಾ ಸಂಘಟನೆಯ ಸಂಘಟನಾ ಸಭೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಕಾಂ ಹೆಚ್ ಜಿ ಉಮೇಶ್, ಕಾಂ ಆವರಗೆರೆ ವಾಸು ಮತ್ತು ಮಹಿಳಾ ಮುಖಂಡರಾದ ಕಾಂ ವಿಶಾಲಾಕ್ಷಿ ಮೃತ್ಯುಂಜಯ, ಕಾಂ ಎಸ್ ಎಸ್ ಮಲ್ಲಮ್ಮ, ಹೊನ್ನಾಳಿಯ ಕಾಂ ಚನ್ನಮ್ಮ, ಜಗಳೂರು ಕಾಂ ಸುಶೀಲಮ್ಮ, ಹೊನ್ನಾಳಿಯ ಕಾಂ ಲಲಿತಮ್ಮ, ಕಾಂ ನಿರ್ಮಲ,ಕಾಂ ರೇಣುಕಾ ,ಯುವಜನ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ ಎಂ.ತಿಪ್ಪೇಶ್ ಸೇರಿದಂತೆ ಮತ್ತಿತರರು ಮಾತನಾಡಿದರು.

ಸಭೆ ಆರಂಭದಲ್ಲಿ ಇಪ್ಟಾ ಜಿಲ್ಲಾಧ್ಯಕ್ಷರಾದ ಕಾಂ ಐರಣಿ ಚಂದ್ರುರವರು ಮಹಿಳೆಯರ ಬದುಕಿನ ಕುರಿತು ಜಾಗೃತಿ ಗೀತೆ ಹಾಡಿದರು, ಸಭೆಯಲ್ಲಿ ಐವತ್ತಕ್ಕೂ ಹೆಚ್ಚು ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು ಕೊನೆಯಲ್ಲಿ ಕಾಂ ಸರೋಜಾ ವಂದಿಸಿದರು .

admin

admin

Leave a Reply

Your email address will not be published. Required fields are marked *

error: Content is protected !!