ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಿ: ಬಸವಪ್ರಭುಶ್ರೀ

ಸುದ್ದಿ360, ದಾವಣಗೆರೆ ಜು.11: ಮಾನವ ಬದುಕಿನಲ್ಲಿ ಸತ್ ಚಿಂತನೆ ಬೇಕು , ಸತ್ ಚಿಂತನೆ ಇಲ್ಲದೇ ಹೋದರೆ ಬದುಕು ದುಷ್ಕೃತ್ಯದ ಗೂಡು ಆಗುತ್ತದೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಸೋಮವಾರ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಜರುಗಿದ ವಿಶೇಷ ಪ್ರವಚನ ಮಾಲೆಯ ಸಾನಿಧ್ಯ ವಹಿಸಿ ಅವರಯ ಆಶೀರ್ವಚನ ನೀಡಿದರು.

ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಿ

ಪ್ರತಿಯೊಬ್ಬ ವ್ಯಕ್ತಿಯಲ್ಲಿ ದುಷ್ಟ ವಿಚಾರಗಳು ಬಂದೇ ಬರುತ್ತವೆ. ಅವುಗಳಿಗೆ ಬ್ರೇಕ್ ಹಾಕಬೇಕು . ವಾಹನದ ಅಪಘಾತ ತಡೆಯಲು ಬ್ರೇಕ್ ಹಾಕುವಂತೆ , ಜೀವನದ ದುಷ್ಟ ಆಲೋಚನೆಗಳನ್ನು ತಡೆಯಲು ಪ್ರವಚನಗಳು ಬೇಕು. ಪ್ರವಚನದ ನುಡಿಗಳನ್ನು ಅಳವಡಿಸಿಕೊಂಡಾಗ ಬದುಕಿನಲ್ಲಿ ಬರುವ ಆಘಾತಕಾರಿ ಕಾರ್ಯವನ್ನು ತಡೆಯಲು ಸಾಧ್ಯ. ಸತ್ ಚಿಂತನೆಯನ್ನು ಕೇಳುವುದರಿಂದ ವ್ಯಕ್ತಿಯ ಎನರ್ಜಿ ಅಧಿಕವಾಗುತ್ತದೆ. ದುರಾಲೋಚನೆ , ದುಷ್ಟವರ್ತನೆಯ ಮಾನವ ಲೋಕಕಂಟಕನಾಗುವನು ಸತ್ ಚಿಂತನೆ , ಸದ್ವರ್ತನೆಯ ಮಾನವ ಲೋಕೋದ್ಧಾರಕಾಗುವನು.  ಪ್ರವಚನಗಳು , ಬಸವಾದಿ ಶರಣರ ವಚನಗಳು ಮಾನವನ ದುರ್ಬುದ್ದಿ ಕಳೆದು ಸದ್ಬುದ್ದಿಯನ್ನು ನೀಡಿ ಬದುಕನ್ನು ಸಮೃದ್ಧಿಯನ್ನಾಗಿ ಮಾಡುತ್ತದೆ.  ಹಾಗಾಗಿ 12 , 13 , 14 ರಂದು ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಂಡಾಗ ಒಳ್ಳೆಯ ಚಿಂತನೆಗಳು  ಬದುಕಿಗೆ ಸಿಗುತ್ತವೆ ಎಲ್ಲರೂ ಪ್ರತಿದಿನ ಸಂಜೆ ಬನ್ನಿ ಎಂದು ಹೇಳಿದರು.

ಎಂ.ಜಯಕುಮಾರ್ , ಅಂದನೂರು ಮುಪ್ಪಣ್ಣ , ಎಸ್. ಓಂಕಾರಪ್ಪ ,  ವೀರೇಂದ್ರ , ಲಂಬಿ ಮುರುಗೇಶಪ್ಪ , ಕಣಕುಪ್ಪಿ ಮುರುಗೇಶಪ್ಪ , ಹಾಸಭಾವಿ ಕರಿಬಸಪ್ಪ , ಕುಂಟೋಜಿ ಚನ್ನಪ್ಪ , ವಿಭೂತಿ ಬಸವಾನಂದರು ಇದ್ದರು ಬಸವಕಲಾ ಲೋಕದವರು ವಚನ ಸಂಗೀತ ನಡೆಸಿಕೊಟ್ಟರು.

ಸಾಧಕರ ಸಮಾವೇಶ ಹೆಚ್ಚಿನ ಮಾಹಿತಿಗಾಗಿ ಇದನ್ನೂ ಓದಿ:  https://suddi360.com/?p=846

admin

admin

Leave a Reply

Your email address will not be published. Required fields are marked *

error: Content is protected !!