ರಾಹುಲ್ ಬಂಧನಕ್ಕೆ ಯುವ ಕಾಂಗ್ರೆಸ್ ಖಂಡನೆ

ಸುದ್ದಿ360 ದಾವಣಗೆರೆ, ಜು.26: ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪೊಲೀಸರು ಬಂಧಿಸಿರುವ ಕ್ರಮದ ವಿರುದ್ಧ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಸಂಜೆ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಎಚ್.ಜೆ. ಮೈನುದ್ದೀನ್, ಬೆಲೆ ಏರಿಕೆ, ಇಡಿ ದುರ್ಬಳಕೆ ಖಂಡಿಸಿ ಸಂಸತ್ ಭವನದ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿಯವರನ್ನು ದೆಹಲಿ ಪೊಲೀಸರು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇಂದು … Read more

ಕಾರ್ಗಿಲ್ ವಿಜಯ ದಿವಸ್ ರಾಯಲ್ ಎನ್ಫೀಲ್ಡ್ ನಲ್ಲಿ ಸಾಗಿದ ತಿರಂಗ ರ್ಯಾಲಿ – ಯೋಧರಿಗೆ ಗೌರವ ನಮನ

ಸುದ್ದಿ360 ದಾವಣಗೆರೆ, ಜು.26: ಕಾರ್ಗಿಲ್ ವಿಜಯ ದಿವಸ್ ಸಂಭ್ರಮ ನಗರದೆಲ್ಲೆಡೆ ಕಳೆಗಟ್ಟಿತ್ತು. ಸಂಭ್ರಮಾಚರಣೆ ಹಾಗೂ ವಿಜಯೋತ್ಸವಕ್ಕೆ ಕಾರಣರಾದ ಯೋಧರಿಗೆ ಗೌರವ ನಮನ ಅರ್ಪಿಸುವ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆಯಿಂದ ಮಂಗಳವಾರ ಬೈಕ್ ರ್ಯಾಲಿ ಜರುಗಿತು. ನಗರದ ಹೈಸ್ಜೂಲ್ ಮೈದಾನದಲ್ಲಿ ಹೊರಡಲು ಸಿದ್ಧವಾಗಿದ್ದ ಬೈಕ್ ರ್ಯಾಲಿಗೆ  ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಹಾಗೂ   ಮಾಜಿ ಮೇಯರ್ ಎಸ್.ಟಿ. ವೀರೇಶ್ ತ್ರಿವರ್ಣ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಮಾಜಿ ಮೇಯರ್ ಎಸ್ ಟಿ. ವೀರೇಶ್ ಮಾತನಾಡಿ, ಕಳೆದ 24 … Read more

ರಂಗಭೂಮಿ ಡಿಪ್ಲೊಮಾಗೆ ಅರ್ಜಿ ಆಹ್ವಾನ

ಸುದ್ದಿ360 ದಾವಣಗೆರೆ ಜು.25: ಮೈಸೂರಿನ ನಟನ ರಂಗಶಾಲೆಯು ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ ‘ರಂಗಭೂಮಿ ಡಿಪ್ಲೊಮಾ’ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಆ.7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಮೈಸೂರಿನ ರಾಮಕೃಷ್ಣ ನಗರದ ಕೆ ಬ್ಲಾಕ್‌ನಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ನಡೆಯಲಿದೆ. ಹಿರಿಯ ರಂಗ ಹಾಗೂ ಚಿತ್ರ ಕಲಾವಿದ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆ, ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಡಿಪ್ಲೊಮಾ ಪ್ರವೇಶಕ್ಕೆ 16ರಿಂದ 30 ವರ್ಷದೊಳಗಿನ … Read more

ಇತಿಹಾಸದಿಂದ ದೇಶದ ಉಳಿವು: ಶಾಸಕ ಎಸ್.ಎ. ರವೀಂದ್ರನಾಥ್ ಅಭಿಮತ

ಸುದ್ದಿ360, ದಾವಣಗೆರೆ ಜು.25: ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಇತಿಹಾಸದಲ್ಲಿ ಅಡಕವಾಗಿದೆ. ಹೀಗಾಗಿ ದೇಶದ ಇತಿಹಾಸವನ್ನು ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದ್ದು, ದೇಶದ ಭದ್ರ ಬುನಾದಿ ಇತಿಹಾದಲ್ಲಿ ಅಡಕವಾಗಿದೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಅಭಿಪ್ರಾಯಪಟ್ಟರು. ಇಲ್ಲಿನ ವಿದ್ಯಾನಗರ ಮುಖ್ಯ ರಸ್ತೆಯ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಬಸವನಕೋಟೆ ಗೌಡ್ರ ವಂಶಸ್ಥರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ಲೇಖಕ ಬಿ.ಎಸ್. ಸಿದ್ದೇಶ್ ಅವರ ಶ್ರೀ ಬೊಮ್ಮಲಿಂಗೇಶ್ವರ ಭಕ್ತರ ಹಿನ್ನೆಲೆ ಕುರಿತ ಸಂಶೋಧನಾ ಕೃತಿ ಲೋಕಾರ್ಪಣೆ … Read more

‘ಶೌಚಾಲಯ ಸೌಲಭ್ಯವಿಲ್ಲದೆ ಉದ್ಘಾಟನೆಗೊಂಡಿರುವ ಸ್ಮಾರ್ಟ್ ಸಿಟಿ ಬಸ್ ಸ್ಟ್ಯಾಂಡ್ – ನಾಚಿಕೆ ಯಾರಿಗೆ ಆಗಬೇಕು?’ ಕೆ.ಎಲ್.ಹರೀಶ್ ಬಸಾಪುರ

ಶೌಚಾಲಯವಿದ್ದರೂ ಬಳಕೆಗೆ ಲಭ್ಯವಿಲ್ಲ ಹಳೆ ದಾವಣಗೆರೆಯಲ್ಲಿ ತಿಂಗಳ ಹಿಂದೆಯೇ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣಗೊಂಡು, ಸಾರ್ವಜನಿಕ  ಉಪಯೋಗಕ್ಕೆ ನೀಡಲಾಗಿದೆ. ಇದಾಗಿ ತಿಂಗಳು ಕಳೆಯುತ್ತಾ ಬಂದರು ಶೌಚಾಲಯ ಮಾತ್ರ ಬೀಗ ತೆರೆದಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಂದರೆ ಕಳಪೆ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆಗೊಂಡ ಯೋಜನೆಗಳು ಎಂಬ ಸಾರ್ವಜನಿಕ ಆಕ್ರೋಶಕ್ಕೆ ಒಳಗಾಗಿರುವ ಯೋಜನೆಗಳಲ್ಲಿ ಯೋಜನಯೇ ಹಳೆ ದಾವಣಗೆರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ಸ್ಟ್ಯಾಂಡ್ ಕೂಡ ಸೇರಿದೆ ಎಂದು ಕೆ.ಎಲ್ … Read more

ಡೀಸೆಲ್ ಟ್ಯಾಂಕರ್ ಪಲ್ಟಿ: ಸ್ಥಳದಲ್ಲಿಯೇ ಇಬ್ಬರು ಸುಟ್ಟು ಕರಕಲು

ಸುದ್ದಿ360, ದಾವಣಗೆರೆ ಜು.24: ಹರಪನಹಳ್ಳಿ ಬಳಿ ಡೀಜಲ್ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಪರಿಣಾಮ ಬೆಂಕಿ ಅವಘಡ ಸಂಭವಿಸಿ ಲಾರಿ ಹೊತ್ತಿ ಉರಿದಿರುವ ಪರಿಣಾಮ ಸ್ಥಳದಲ್ಲಿ ಇಬ್ಬರು ಸುಟ್ಡು ಕರಕಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಮೀಪದಲ್ಲಿದ್ದ ಬೈಕ್ ಸವಾರನೋರ್ವ ಬಹುತೇಕ ಸುಟ್ಟ ಸ್ತೀತಿಯಲ್ಲಿ ಬದುಕುಳಿದಿದ್ದಾರೆ.

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜು.25ರಿಂದ ಮೂರು ದಿನ ಚಿತ್ರೋತ್ಸವ

ಸುದ್ದಿ360 ದಾವಣಗೆರೆ, ಜು.23: ಇಲ್ಲಿನ ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜು.25ರಿಂದ 27ರವರೆಗೆ ಮೂರು ದಿನಗಳ ಚಿತ್ರೋತ್ಸವ -2022 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 25ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭಕ್ಕೆ ದಾವಣಗೆರೆ ವಿವಿ ಉಪಕುಲಪತಿ ಪ್ರೊ.ಬಿ.ಡಿ. ಕುಂಬಾರ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ, ಅತಿಥಿಯಾಗಿ ಕಲಾ ನಿಕಾಯದ ಡೀನ್ ಡಾ. ವೆಂಕಟರಾವ್ ಎಂ. ಪಲಾಟೆ ಪಾಲ್ಗೊಳ್ಳುವರು.  ಮಹಾವಿದ್ಯಾಲಯದ ಸಂಯೋಜನಾಕಾರಿ … Read more

ಕರ್ನಲ್ ರವೀಂದ್ರನಾಥರ ಹೆಸರನ್ನು ಅಮರವಾಗಿಸಿದ ದಾವಣಗೆರೆ ಮಹಾನಗರ ಪಾಲಿಕೆ

ಕ್ಲಾಕ್ ಸರ್ಕಲ್ ಇನ್ನುಮುಂದೆ ಕರ್ನಲ್ ರವೀಂದ್ರನಾಥ ಸರ್ಕಲ್ ಸುದ್ದಿ360 ದಾವಣಗೆರೆ, ಜು.23: ನಗರದ ರಿಂಗ್ ರಸ್ತೆಯಲ್ಲಿ ಇದುವರೆಗೂ ಕ್ಲಾಕ್ ಸರ್ಕಲ್‌ ಎಂದು ಹೆಸರಿಸುತ್ತಿದ್ದ ವೃತ್ತಕ್ಕೆ ‘ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತ’ ಎಂದು ನಾಮಕರಣ ಮಾಡುವ ಮೂಲಕ ಕಾರ್ಗಿಲ್ ವಿಜಯದ ರೂವಾರಿ ರವೀಂದ್ರನಾಥ ಅವರ ಹೆಸರನ್ನು ದಾವಣಗೆರೆ ಮಹಾನಗರ ಪಾಲಿಕೆ ಅಮರವಾಗಿಸಿದೆ. ಇದರಿಂದ ಕಾರ್ಗಿಲ್ ಯುದ್ಧದ ವೇಳೆ ದೇಶಕ್ಕೆ ಪಾಕ್ ಸೇನೆ ವಿರುದ್ಧ ಮೊದಲ ಜಯ ದೊರಕಿಸಿದ ಖ್ಯಾತಿ ಹೊಂದಿರುವ ಕರ್ನಲ್ ರವೀಂದ್ರನಾಥ್ ಅವರ ಹೆಸರನ್ನು ನಗರದ ವೃತ್ತವೊಂದಕ್ಕೆ … Read more

ದುಷ್ಚಟದ ಸ್ನೇಹಿತರೆಡೆ ಅಸಡ್ಡೆ ತೋರದೆ ಸನ್ನಡತೆಯತ್ತ ಕರೆತನ್ನಿ: ಸಿ.ಬಿ. ರಿಷ್ಯಂತ್

ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ನಾಗರಿಕರು ತಮ್ಮ ಸುತ್ತ ಯಾವುದೇ ರೀತಿಯ ತಪ್ಪು ನಡೆದಾಗ ಅದನ್ನು ತಪ್ಪು ಎಂದು ಧೈರ್ಯವಾಗಿ ಹೇಳುವ, ಖಂಡಿಸುವ ಮತ್ತು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಸಲಹೆ ನೀಡಿದರು.

‘ಕೈರುಚಿ’ ತೋರಿಸಿದ  ಎ.ವಿ.ಕೆ. ಕಾಲೇಜು ವಿದ್ಯಾರ್ಥಿನಿಯರು

ಸುದ್ದಿ360 ದಾವಣಗೆರೆ, ಜು.23: ಪನ್ನೀರ್ ಟಿಕ್ಕಾ, ಪಾವ್ ಬಾಜಿ, ವಡಾ ಪಾವ್, ಫ್ರೂಟ್ ಸಲಾಡ್, ಗ್ರೀನ್ ಸಲಾಡ್, ಮೊಳಕೆ ಕಾಳು ಸಲಾಡ್, ಸಿಹಿ ತಿನಿಸು, ಪಾನಿಪುರಿ, ಬ್ರೆಡ್ ಟೋಸ್ಟ್, ಪಲಾವ್ ಸೇರಿ ವಿವಿಧ ರೈಸ್ ಬಾತ್, ಫುಲ್ ಮೀಲ್ಸ್, ಮಿನಿ ಮೀಲ್ಸ್ ಸೇರಿ ತರಹೇವಾರಿ ತಿನಿಸುಗಳು. . . ಇವುಗಳನ್ನೆಲ್ಲಾ ಸವಿಯುವಂತಹ ಫುಡ್ ಸ್ಟ್ರೀಟ್ ನಗರದ ಅಕ್ಕಮಹಾದೇವಿ ರಸ್ತೆಯ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಕಂಡು ಬಂತು. ಹೌದು, ಅಕ್ಷರಶಃ ಫುಡ್ ಸ್ಟ್ರೀಟ್ ಆಗಿ ಮಾರ್ಪಟ್ಟಿದ್ದ … Read more

error: Content is protected !!